ಭಕ್ತ ಪ್ರಹ್ಲಾದ

ಭಕ್ತ ಪ್ರಹ್ಲಾದ

ಹಿರಣ್ಯಕಶ್ಯಪೂಗೆ ದೊರೆತ ವರ

ಹಿರಣ್ಯಕಶ್ಯಪೂ ಎಂಬ ರಾಜನಿಗೆ ಪ್ರಹ್ಲಾದನೆಂಬ ಮಗನಿದ್ದನು. ಹಿರಣ್ಯಕಶ್ಯಪೂವು ಘೋರ ತಪಸ್ಸನ್ನು ಆಚರಿಸಿ ದೇವರನ್ನು ಪ್ರಸನ್ನಗೊಳಿಸಿ ’ತನ್ನ ಮರಣವು ಮನುಷ್ಯನಿಂದಾಗಲಿ ಪ್ರಾಣಿಗಳಿಂದಾಗಲಿ ಬರಕೂಡದು, ಹಗಲು ಅಥವಾ ರಾತ್ರಿ ಬರಬಾರದು, ಮನೆಯಲ್ಲಿ ಅಥವಾ ಮನೆಯ ಹೊರಗೆ ಬರಬಾರದು.’ ಎಂದು ವರ ಪಡೆದುಕೊಂಡಿದ್ದನು. ಈ ವರದಿಂದ ಅವನಿಗೆ ತನ್ನನ್ನು ಯಾರೂ ಕೊಲ್ಲಲಾರರು ಎಂದು ಅನಿಸಿತು. ಇದರಿಂದ ರಾಜನಿಗೆ ಅಹಂಕಾರ ಬಂದಿತು. ಅವನಿಗೆ ‘ದೇವರಿಗಿಂತ ತಾನೇ ದೊಡ್ಡವನು’, ಎಂದು ಅನಿಸತೊಡಗಿತು. ಯಾರಾದರೂ ದೇವರ, ಅದರಲ್ಲಿಯೂ ವಿಷ್ಣುವಿನ ಹೆಸರುಹೇಳಿದರೆ ಅವನಿಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ.

ಪ್ರಹ್ಲಾದನ ದೇವ ಭಕ್ತಿ

ಹಿರಣ್ಯಕಶ್ಯಪೂವಿನ ​ ಮಗನಾದ ಪ್ರಹ್ಲಾದನು ಮಾತ್ರ ಸತತವಾಗಿ ದೇವರ ನಾಮಸ್ಮರಣೆಯನ್ನು ಮಾಡುತ್ತಿದ್ದನು. ‘ನಾರಾಯಣ ನಾರಾಯಣ’ ಹೀಗೆ ಜಪ ಮಾಡುತ್ತಲೇ ಅವನು ದೈನಂದಿನ ಕೆಲಸಗಳನ್ನು ಮಾಡುತ್ತಿದ್ದನು. ತಂದೆಗೆ ದೇವರ ನಾಮಸ್ಮರಣೆ ಮಾಡುವುದು ಇಷ್ಟವಾಗುವುದಿಲ್ಲವೆಂದು ಪ್ರಹ್ಲಾದನು ತಂದೆಯ ಎದುರು ಬರುತ್ತಿರಲಿಲ್ಲ. ಆದರೂ ಯಾವಾಗಲೊಮ್ಮೆ ಪ್ರಹ್ಲಾದನಿಗೆ ರಾಜನ ಭೇಟಿಯಾಗುತ್ತಿತ್ತು. ಪ್ರಹ್ಲಾದನ ನಾಮಸ್ಮರಣೆಯನ್ನು ಕೇಳಿ ರಾಜನು ಸಿಟ್ಟಿನಿಂದ ಕೆಂಡಮಂಡಲವಾಗುತ್ತಿದ್ದನು ಹಾಗೂ ಮಗನಿಗೆ ಸಾಕಷ್ಟು ದೊಡ್ಡ ಶಿಕ್ಷೆಯನ್ನು ವಿಧಿಸುವಂತೆ ಸೇವಕರಿಗೆ ಆಜ್ಞೆ ಮಾಡುತ್ತಿದ್ದನು.

ಪ್ರಹ್ಲಾದನ ಭಕ್ತಿಯ ಪರೀಕ್ಷೆ

ಒಂದು ದಿನ ನಾಮಜಪದಲ್ಲಿ ತಲ್ಲೀನನಾಗಿದ್ದ ಪ್ರಹ್ಲಾದನಿಗೆ ಹಿರಣ್ಯಕಶ್ಯಪೂಬರುತ್ತಿರುವುದು ತಿಳಿಯಲೇ ಇಲ್ಲ. ರಾಜನು ನಾಮಜಪ ಕೇಳುತ್ತಿದ್ದಂತೆಯೇ ಸೇವಕರಿಗೆ ’ಬೆಟ್ಟದ ಎತ್ತರದ ಭಾಗದಿಂದ ಆಳವಾದ ಕಂದಕದಲ್ಲಿ ಪ್ರಹ್ಲಾದನನ್ನುನೂಕಿ ಹಾಗೂ ಹೀಗೆ ಮಾಡಿದ ನಂತರ ಬಂದು ನನಗೆ ತಿಳಿಸಿ’ ಎಂದುಆಜ್ಞೆ ಮಾಡಿದನು. ಸೇವಕರು ಹಾಗೆ ಮಾಡಿದರು ಹಾಗೂ ರಾಜನಿಗೆ ಈ ಬಗ್ಗೆ ತಿಳಿಸಿದರು. ಸ್ವಲ್ಪ ಹೊತ್ತಿನಲ್ಲಿಯೇ ಅರಮನೆಯ ಮಹಡಿಯಲ್ಲಿ ನಿಂತ ರಾಜನಿಗೆ ದೂರದಿಂದಲೇ ಪ್ರಹ್ಲಾದನು ಅರಮನೆಯತ್ತ ಬರುತ್ತಿರುವುದು ಕಾಣಿಸಿತು. ಜೀವಂತವಾಗಿರುವ ಪ್ರಹ್ಲಾದನನ್ನು ಕಂಡು ರಾಜನು ಸೇವಕರ ಮೇಲೆ ಕುಪಿತಗೊಂಡನು. ನಡೆದ ವಿಷಯವನ್ನು ತಿಳಿಯಲು ಮಗನನ್ನೇ ವಿಚಾರಿಸಬೇಕು ಎಂದು ‘ಪ್ರಹ್ಲಾದನು ಅರಮನೆಯಲ್ಲಿ ಪ್ರವೆಶಿದ ಕೂಡಲೇ ನನ್ನ ಎದುರಿನಲ್ಲಿ ನಿಲ್ಲಿಸಿ', ಎಂದುರಾಜನು ಸೇವಕರಿಗೆ ಆಜ್ಞೆ ಮಾಡಿದನು. ಅರಮನೆಗೆಬಂದನಂತರ ಪ್ರಹ್ಲಾದನು ರಾಜನೆದುರು ವಿನಮ್ರವಾಗ ನಿಂತನು. ರಾಜನು ಅವನಿಗೆ ಕೇಳಿದನು. ‘ಸೇವಕರು ನಿನಗೆ ಬೆಟ್ಟದ ಮೇಲಿನ ತುದಿಯಿಂದ ನೂಕಿ ಹಾಕಿದರೋ, ಇಲ್ಲವೋ?' ಗುಡುಗಿದನು. ‘ಹೌದು, ನೂಕಿದರು’ ಎಂದು ಪ್ರಹ್ಲಾದ ಉತ್ತರಿಸಿದನು. ರಾಜನು ಪುನಃ ಕೇಳಿದನು, ‘ಹಾಗಾದರೆ ನೀನು ಇಲ್ಲಿ ಹೇಗೆ ಬಂದಿರುವಿ?’ ಆಗ ಪ್ರಹ್ಲಾದನು ನಗುತ್ತ ಹೇಳಿದನು, ‘ನಾನು ಒಂದು ಮರದ ಮೇಲೆ ನಿಧಾನವಾಗಿ ಬಿದ್ದೆ. ಮರದ ಮೇಲಿಂದ ಕೆಳಗೆ ಇಳಿದೆ. ಅಲ್ಲಿಂದಲೇ ಒಂದು ಎತ್ತಿನಗಾಡಿ ಹೊರಟಿತ್ತು. ಅದರಲ್ಲಿ ಕುಳಿತು ದಾರಿಯವರೆಗೆ ತಲುಪಿದೆ. ಏಕೋ, ಏನೋ; ಸತತ ನನ್ನ ಜೊತೆ ಯಾರೋ ಇದ್ದಾರೆಎಂದು ಅನ್ನಿಸುತ್ತಿತ್ತು; ಆದುದರಿಂದ ನಾನು ಇಲ್ಲಿ ಬೇಗ ತಲುಪಿದೆ.' ಇದನ್ನು ಕೇಳಿ ನಿರಾಶನಾದ ರಾಜನು ಪ್ರಹ್ಲಾದನಿಗೆ ಹೋಗಲು ತಿಳಿಸಿದನು.

ಪ್ರಹ್ಲಾದನಿಗೆ ಮತ್ತೊಮ್ಮೆ ಶಿಕ್ಷೆ

ಕೆಲದಿನಗಳು ಉರುಳಿದವು. ರಾಜನ ವಿಶಿಷ್ಟ ಜನರಿಗಾಗಿ ಭೋಜನ ಸಿದ್ಧಪಡಿಸುವಲ್ಲಿ ಪ್ರಹ್ಲಾದನು ಏನೋ ಕೆಲಸಕ್ಕೆಂದು ಹೋಗಿರುವಾಗ ಅದೇ ಸಮಯಕ್ಕೆ ಅಲ್ಲಿ ಬಂದ ರಾಜನ ಗಮನವು ಪ್ರಹ್ಲಾದನ ಮೇಲೆ ಬಿತ್ತು. ಪ್ರಹ್ಲಾದನು ‘ನಾರಾಯಣ ನಾರಾಯಣ’ ಎಂದು ನಾಮಜಪ ಮಾಡುತ್ತ ಹೊರಟಿದ್ದನು. ಪುನಃ ರಾಜನು ಕೋಪಗೊಂಡನು. ಹತ್ತಿರದಲ್ಲೇ ಇರುವ ದೊಡ್ಡ ಬಾಣಲೆಯಕಾಯ್ದ ಎಣ್ಣೆಯಲ್ಲಿ ಪ್ರಹ್ಲಾದನನ್ನುಹಾಕಿ' ಎಂದು ಅವನು ಸೇವಕರಿಗೆ ಆಜ್ಞೆ ಮಾಡಿದನು. ಸೇವಕರು ಗಾಬರಿಗೊಂಡರು; ಏಕೆಂದರೆ ಪ್ರಹ್ಲಾದನ್ನು ಎಣ್ಣೆಯಲ್ಲಿ ಹಾಕುವಾಗ ಕಾಯ್ದ ಎಣ್ಣೆಯು ತಮ್ಮಮೈಮೇಲೆ ಸಿಡಿದು ಬಿದ್ದು ನಾವು ಸುಟ್ಟುಕೊಳ್ಳಬಹುದೆಂದು ಅವರಿಗೆ ಹೆದರಿಕೆ ಆಯಿತು; ಆದರೆ ಏನು ಮಾಡುವುದು? ರಾಜಾಜ್ಞೆಯನ್ನು ಪಾಲಿಸಲೇ ಬೇಕು; ಆದುದರಿಂದ ಅವರು ಪ್ರಹ್ಲಾದನನ್ನು ಕಾಯ್ದ ಎಣ್ಣೆಯಲ್ಲಿ ಹಾಕಿದರು. ‘ಈಗ ಇವನಿಗೆ ಯಾರು ಕಾಪಾಡುವರು’, ಎಂಬುದನ್ನು ನೋಡಲು ರಾಜನು ಅಲ್ಲೇ ಉಪಸ್ಥಿತನಿದ್ದನು. ನಾಲ್ಕೂ ಬದಿಯಿಂದ ಕಾಯ್ದ ಎಣ್ಣೆಯು ಸಿಡಿಯಿತು. ಸೇವಕರು ಸುತ್ತು ಗಾಯಗಳಿಂದ ನೋವು ತಡೆಯಲಾರದೇ ಒದ್ದಾಡುತಿದ್ದರು.; ಆದರೆ ಪ್ರಹ್ಲಾದ ಮಾತ್ರ ಶಾಂತವಾಗಿ ನಿಂತಿದ್ದನು. ರಾಜನು ಬೆರಗಾಗಿನಿಂತನು. ನೋಡುತ್ತಾ ಬಾಣಲೆಯಲ್ಲಿ ಕಮಲಗಳು ಕಾಣಹತ್ತಿದವು. ಅದರ ಮೇಲೆ ಪ್ರಹ್ಲಾದನು ಶಾಂತವಾಗಿನಿಂತಿದ್ದನು. ಪುನಃ ಕೋಪಗೊಂಡ ರಾಜನುತನ್ನ ಪರಿವಾರ ಸಮೇತವಾಗಿ ಹೊರಟುಹೋದನು.

ಪ್ರಹ್ಲಾದನ ಭಕ್ತಿಗೆ ವಿಷ್ಣು ನರಸಿಂಹ ಅವತಾರ ತಾಳುವುದು

ರಾಜನು ಪ್ರಹ್ಲಾದನ ಮೇಲೆ ಕಣ್ಣಿಟ್ಟಿದ್ದನು. ಕೊನೆಗೆ ಒಂದು ದಿನ ರಾಜನು ಪ್ರಹ್ಲಾದನಿಗೆ ಕೇಳಿದನು, ‘ಹೇಳು, ಎಲ್ಲಿದ್ದಾನೆ ನಿನ್ನ ದೇವರು? ಆಗ ಪ್ರಹ್ಲಾದನು ‘ಎಲ್ಲೆಡೆ’ ಎಂದುಹೇಳಿದನು. ರಾಜನು ಹತ್ತಿರದಲ್ಲೇ ಇದ್ದ ಕಂಬವನ್ನು ಒದ್ದು ‘ಈ ಕಂಬದಲ್ಲಿಯೂ ಇದ್ದಾನೆಯೇ? ಇದ್ದಾರೆ ತೋರಿಸಿ ನಿನ್ನ ದೇವರನ್ನು!’ ಎಂದು ಗುಡುಗಿದನು.ಅಷ್ಟರಲ್ಲಿಯೆ ಗರ್ಜಿಸುತ್ತ ನರಸಿಂಹನು ಕಂಬದೊಳಗಿಂದ ಪ್ರಕಟನಾದನು. ಹಿರಣ್ಯಕಶ್ಯಪೂ ಪಡೆದ ವರಗಳ ನಿಯಮಗಳನ್ನು ಪಾಲಿಸಲುಮನುಷ್ಯನ ಶರೀರ ಹಾಗೂ ಸಿಂಹದ ಮುಖ (ತಲೆ) ಇದ್ದ ನರಸಿಂಹ(ಅಂದರೆ ಮನುಷ್ಯ ಅಥವಾ ಪ್ರಾಣಿಯಲ್ಲ), ಹೊಸ್ತಿಲಿನ ಮೇಲೆ (ಅಂದರೆ ಮನೆಯಲ್ಲಿ ಅಥವಾ ಮನೆಯ ಹೊರಗೆ ಅಲ್ಲ), ಮುಸ್ಸಂಜೆಯ ಸಮಯದಲ್ಲಿ(ಅಂದರೆ ಹಗಲು ಅಥವಾ ರಾತ್ರಿಯಲ್ಲ)ಹಿರಣ್ಯಕಶ್ಯಪೂವಿನ ಹೊಟ್ಟೆಯನ್ನು ಉಗುರುಗಳಿಂದ (ಶಸ್ತ್ರ ಅಥವಾ ಅಸ್ತ್ರದಿಂದ ಮರಣ ಬರುವಂತಿಲ್ಲ) ಸೀಳಿಅವನನ್ನು ನಾಶಗೊಳಿಸಿದನು.

*****************ಕೃಪೆ: ಬಾಲಸಂಸ್ಕಾರ*****************

ಕಾಮೆಂಟ್‌ಗಳಿಲ್ಲ: