ವರಕವಿ ದ.ರಾ.ಬೇಂದ್ರೆ.

ವರಕವಿ ದ.ರಾ.ಬೇಂದ್ರೆ.

ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರು. ದ.ರಾ .ಬೇಂದ್ರೆಯವರು ಧಾರವಾಡದಲ್ಲಿ 1886ರ ಜನವರಿ 31ರಂದು ಜನಿಸಿದರು. ಇವರ ತಂದೆ ರಾಮಚಂದ್ರ ಬೇಂದ್ರೆ ಹಾಗೂ ತಾಯಿ ಅಂಬವ್ವ. ಅಂಬಿಕೆಯ ತನಯ ತಾನು ದತ್ತ ಎಂಬ ಅರ್ಥದಲ್ಲಿ ಬೇಂದ್ರೆಯವರು ದ.ರಾ. ಬೇಂದ್ರೆ ಎಂಬ ಕಾವ್ಯನಾಮವನ್ನು ಇರಿಸಿಕೊಂಡರು. ಧಾರವಾಡ ಹಾಗೂ ಸಾಧನಕೇರಿಯ ಪ್ರದೇಶವನ್ನು ನೆಲೆಯಾಗಿಸಿ ಅವರು ಸಾಹಿತ್ಯ ಕೃಷಿ ನಡೆಸಿದರು.ಧಾರವಾಡದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬೇಂದ್ರೆಯವರು ಮಹಾರಾಷ್ಟ್ರದ ಪುಣೆಯಲ್ಲಿ ಪದವಿ ಪೂರೈಸಿದರು. ಕರ್ನಾಟಕದ ಗದುಗಿನಲ್ಲಿ ಕೆಲಕಾಲ ಮುಖ್ಯಾಧ್ಯಾಪಕರಾಗಿದ್ದರು. ಬಳಿಕ ಎಂ.ಎ. ಪದವಿ ಪಡೆದು ಧಾರವಾಡದ ವಿಕ್ಟೋರಿಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಇದೇ ಸಂದರ್ಭದಲ್ಲಿ ಗೆಳೆಯರ ಬಳಗ ಎಂಬ ಸಾಹಿತ್ಯ ರಸಿಕರ ಕೂಟವನ್ನು ರಚಿಸಿದರು.

ಅಂಬಿಕಾತನಯ ದತ್ತರ ಪ್ರಮುಖ ಕೃತಿಗಳೆಂದರೆ ಕೃಷ್ಣಕುಮಾರಿ, ಗರಿ, ನಾಕುತಂತಿ, ಸಖಿಗೀತ, ನಾದಲೀಲೆ, ಉಯ್ಯಾಲೆ, ಅರಳುಮರಳು,ನಾಕುತಂತಿ, ಬಾ ಹತ್ತರ, ಸೂರ್ಯಪಾನ, ಮೂರ್ತಿಮತ್ತು ಕಾಮಕಸ್ತೂರಿ, ಹೃದಯ ಸಮುದ್ರ, ಮುಕ್ತ ಕಂಠ, ಸಂಚಯ, ಉತ್ತರಾಯಣ ಮುಂತಾದ ಕವನ ಸಂಗ್ರಹಗಳು.ಬಾಲಬೋಧೆ, ಪರಾಕಿ, ಕಾವ್ಯ ವೈಖರಿ ಮುಂತಾದ 20ಕ್ಕೂ ಅಧಿಕ ಗದ್ಯ ಬರಹ ಸಂಗ್ರಹಗಳು. ಸಾಹಿತ್ಯವಿಮರ್ಶೆ, ಸಾಹಿತ್ಯ ಸಂಶೋಧನೆ, ವಿಚಾರ ಮಂಜರಿ, ಮುಂತಾದ ಹಲವು ಸಾಹಿತ್ಯ ಗ್ರಂಥಗಳನ್ನು ರಚಿಸಿದ್ದಾರೆ.

ಬೇಂದ್ರೆಯವರಿಗೆ ಕಾಶಿಹಿಂದೂ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್, ನಾಕುತಂತಿ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿಯ ಮೂಲಕ ಸಾಹಿತ್ಯ ಕ್ಷೇತ್ರದ ಸರ್ವೋಚ್ಛ ನೆಲೆಯಲ್ಲಿ ಗುರುತಿಸಿಕೊಂಡ ಬೇಂದ್ರೆಯವರು 1981ರಲ್ಲಿ ಇಹಲೋಕ ಯಾತ್ರೆ ಮುಗಿಸಿದರು.

ಕವನ ಸಂಕಲನಗಳು

  1. ಕೃಷ್ಣಕುಮಾರಿ.
  2. ಗರಿ.
  3. ನಾಕುತಂತಿ.
  4. ಸಖಿಗೀತ.
  5. ನಾದಲೀಲೆ.
  6. ಉಯ್ಯಾಲೆ.
  7. ಚೈತನ್ಯದ ಪೂಜೆಗೆ.
  8. ಅರಳುಮರಳು.
  9. ಬಾ ಹತ್ತರ.
  10. ಸೂರ್ಯಪಾನ.
  11. ಮೂರ್ತಿ ಮತ್ತು ಕಾಮಕಸ್ತೂರಿ.
  12. ಗಂಗಾವತರಣ.
  13. ಹೃದಯ ಸಮುದ್ರ.
  14. ಮುಕ್ತ ಕಂಠ.
  15. ಸಂಚಯ.
  16. ಉತ್ತರಾಯಣ
  17. ಇತರೆ.

ಕಾಮೆಂಟ್‌ಗಳಿಲ್ಲ: